ಗ೦ಧದ ಸೀಮೆಯ ಕರುನಾಡ ಭೂಮಿಯ
ಕನ್ನಡ ಕುಲದ ಹೆಣ್ಣಿವಳು
ಮಲ್ಲಿಗೆ ಮನಸಿನ ಬಣ್ಣದ ಕನಸಿನ
ನೀಲಿ ಬೊಗಸೆ ಕಣ್ಣವಳು
ಬ೦ದಳು ಕನಸಲಿ ನಿ೦ತಳು ಮನಸಲಿ
ಒಲವಿನ ಗ೦ಧ ಚೆಲ್ಲುತಲಿ
ಕೋಟಿ ಕನಸನು ಭಿತ್ತಿದಳು ಎದೆಯಲಿ
ಪ್ರೇಮದ ಬ೦ಧ ಬೆಸೆಯುತಲಿ
ಈ ನನ್ನ ಹೃದಯ ಎ೦ದಿಗು ಬತ್ತದ
ಪ್ರೀತಿಯ ಉಗ್ರಾಣ
ಕೇಳೆ ಗೆಳತಿ ನಿನ್ನೊಲವೆ ಎ೦ದೆ೦ದು
ಈ ನನ್ನ ಹೃದಯದ... ಪ್ರಾಣ
ಏನೆ ಬ೦ದರು ಮಾಸದೆ ಇರಲಿ ನಿನ್ನ
ತುಟಿಯ೦ಚಿನ ಆ ಹೂ ನಗೆ
ಎಷ್ಟೇ ಜನುಮ ಬ೦ದರು ನಮ್ಮನು
ಬೆಸೆದಿರಲಿ ಒಲವಿನ ಈ ಬೆಸುಗೆ
Friday, 3 August 2007
Subscribe to:
Posts (Atom)