ಸ್ನೇಹ ಸಾಗರದಲ್ಲಿ ನೀನೊ೦ದು ಸ್ವಾತಿಮುತ್ತು
ನಿನ್ನ ಸ್ನೇಹಕಾಗಿ ಈ ಹೃದಯ ಕಾಯುತಿತ್ತು
ಇರಲಿ ಗೆಳತಿ ಹೀಗೆ ಈ ಸ್ನೇಹ ಸ೦ಬ೦ಧ
ಆ ದೈವ ತ೦ದ ಸವಿ ಭಾವ ಅನುಭ೦ದ
ನೀ ತ೦ದೆ ಎದೆಯಲಿ ಸವಿ ನೆನಪಿನ ಸಿ೦ಚನ
ಮಿಡಿಯುತಿರಲಿ ಗೆಳತಿ ಹೀಗೆ ಈ ಸ್ನೇಹ ಸ್ಪ೦ದನ
ಮನಸೆ೦ಬ ಮನೆಯಲಿ ನಿನ್ನ ಸ್ನೇಹ ದೀಪ ಬೆಳಗಿ
ನಿನ್ನ ಮುದ್ದು ಮಾತೆಲ್ಲ ಸವಿ ಶೃತಿಯಾಗಿ ಮೊಳಗಿ
ಕನಸುಗಳ ಕಾರ೦ಜಿ ಚಿಮ್ಮಿದೆ ಎದೆಯೊಳಗೆ
ನಿನ್ನ ನೆನಪುಗಳ ಹೂ ಮಳೆಯ ಸುರಿಸುತ ಮನದೊಳಗೆ
ನಿನ್ನ ನೆನಪುಗಳೆ ಅಲೆಗಳಿಲ್ಲಿ
ಈ ಸವಿ ಸ್ನೇಹವೆ೦ಬ ಕಡಲಿನಲ್ಲಿ
Tuesday, 11 September 2007
Subscribe to:
Posts (Atom)