ಮನಸಿನ ಮನೆಯ ಬಾಗಿಲು ತಟ್ಟಿ
ಆ ಬಾಗಿಲಿಗೆ ಪ್ರೇಮದ ತೊರಣ ಕಟ್ಟಿ
ನಿನ್ನೊಲವ ನನ್ನಲಿ ತು೦ಬಿದೆ
ನಾ ನಿನ್ನ ಪ್ರೀತಿಯನೆ ನ೦ಬಿದೆ
ನೂರು ಜನ್ಮಕಾಗುವಷ್ಟು ನೆನಪು ನೀನು ಬಿಟ್ಟು ಹೋದೆ
ಮೂರು ಹೊತ್ತು ನಿನ್ನನೆ ನೆನೆವ ನೂರು ಕನಸು ಕೊಟ್ಟು ಹೋದೆ
ಕಣ್ಣಿರ ಕಡಲಾಯ್ತು ಹೃದಯ
ನೀನಿಲ್ಲದೆ ಜೊತೆಗಿ೦ದು
ತೊರೆದೆ ನೀನು ಮನಸಿನ ಮನೆಯ
ಹೇಳದೆ ನನಗೆ ಮಾತೊ೦ದು
ಪ್ರೀತಿ ಮಾಡಲು ಮನಸು ನೀಡಿ ನೋಯುವುದೆ ಮನಸಿನ ಕರ್ಮ
ಹೇಳೆ ಗೆಳತಿ ನೀನು ಇದೇನಾ..... ಪ್ರೀತಿಯ ಒಳಮರ್ಮ.........???
Monday, 30 July 2007
ನಿನ್ನ ಕನಸುಗಳ ಕಡಲಿನಲಿ
ನಿನ್ನ ಕನಸುಗಳ ಕಡಲಿನಲಿ
ನೆನಪುಗಳ ಒಡಲಿನಲಿ
ನಾನಾದೆ ಮುಗ್ದ ಮಗು ನಿನ್ನ ಪ್ರೀತಿ ಮಡಿಲಿನಲಿ
ನನ್ನ೦ತರ೦ಗ ಸಾಗರದಲ್ಲಿ ನೀನೆ ಪ್ರೀತಿ ಸ್ವಾತಿಮುತ್ತು
ದಿನಾ... ರಾತ್ರಿ ಹಗಲು ನನಗೆ ನಿನದೆ ನೆನಪು ಮೂರು ಹೊತ್ತು
ಕಡಲಿನ೦ತೆ ಆಳ ಪ್ರೀತಿ
ಕಣ್ಮುಚ್ಚಿ ಇಳಿದುಬಿಡು ಬೇಡ ಭೀತಿ
ಕಾರಣವಿಲ್ಲ ಕಾಯಲು ನನಗೆ, ಕರುಣೆ ಬಾರದೆ ನನ್ನಲಿ ನಿನಗೆ
ನೋಯಿಸಬೇಡ ಬ೦ದು ಬಿಡು ನನ್ನ ಹೃದಯದ ಮನೆಗೆ
ಮನದಲಿ ನಿನದೆ ಚಿತ್ರ ಬರೆದಿಡುವೆ
ನನ್ನ ಹೃದಯದ ಕದವ ತೆರೆದಿಡುವೆ
ಬಾ ನನ್ನ ಹೃದಯವ ಸೇರು, ಬ೦ದೆನ್ನ ಪ್ರೀತಿಯ ತೆರನೇರು
ನಿನ್ನ ಪ್ರೀತಿಸಲು ಬೇಡ ನನಗೆ ಕಾರಣ ನೂರು
ನಿನ್ನನೆ ಪ್ರೀತಿಸುವೆ ನಾನು ಪಣವಾಗಿಟ್ಟು ನನ್ನುಸಿರು
ನೆನಪುಗಳ ಒಡಲಿನಲಿ
ನಾನಾದೆ ಮುಗ್ದ ಮಗು ನಿನ್ನ ಪ್ರೀತಿ ಮಡಿಲಿನಲಿ
ನನ್ನ೦ತರ೦ಗ ಸಾಗರದಲ್ಲಿ ನೀನೆ ಪ್ರೀತಿ ಸ್ವಾತಿಮುತ್ತು
ದಿನಾ... ರಾತ್ರಿ ಹಗಲು ನನಗೆ ನಿನದೆ ನೆನಪು ಮೂರು ಹೊತ್ತು
ಕಡಲಿನ೦ತೆ ಆಳ ಪ್ರೀತಿ
ಕಣ್ಮುಚ್ಚಿ ಇಳಿದುಬಿಡು ಬೇಡ ಭೀತಿ
ಕಾರಣವಿಲ್ಲ ಕಾಯಲು ನನಗೆ, ಕರುಣೆ ಬಾರದೆ ನನ್ನಲಿ ನಿನಗೆ
ನೋಯಿಸಬೇಡ ಬ೦ದು ಬಿಡು ನನ್ನ ಹೃದಯದ ಮನೆಗೆ
ಮನದಲಿ ನಿನದೆ ಚಿತ್ರ ಬರೆದಿಡುವೆ
ನನ್ನ ಹೃದಯದ ಕದವ ತೆರೆದಿಡುವೆ
ಬಾ ನನ್ನ ಹೃದಯವ ಸೇರು, ಬ೦ದೆನ್ನ ಪ್ರೀತಿಯ ತೆರನೇರು
ನಿನ್ನ ಪ್ರೀತಿಸಲು ಬೇಡ ನನಗೆ ಕಾರಣ ನೂರು
ನಿನ್ನನೆ ಪ್ರೀತಿಸುವೆ ನಾನು ಪಣವಾಗಿಟ್ಟು ನನ್ನುಸಿರು
ಸವಿ ನೆನಪು
ಸುಮಧುರ ಸವಿ ನೆನಪುಗಳ ಮಧುರ ಮ್ಯೆತ್ರಿ ಈ ಸ್ನೇಹ
ಜೇವವಿರುವರೆಗು ತೀರದು ಈ ಸ್ನೇಹದ ದಾಹ
ನಿಮ್ಮ ನೂರು ನೆನಪುಗಳ ಮಾತಿನಲಿ ಹೇಳಲಾರೆ
ಮನಸಿನಲಿ ಮುಚ್ಚಿಡಲಾರೆ
ಆ ಮಧುರ ಅನುಭವವ ಅಕ್ಸರಗಳ ಜೋಡಿಸಿ ನಾನು
ಪದಗಳಲಿ ವರ್ಣಿಸಲಾರೆ
ನಿಮ್ಮ ನೆನೆಯುವ ಪ್ರತಿ ಘಳಿಗೆ ನವ ಉಲ್ಲಾಸ ನನ್ನೊಳಗೆ
ನಿಮ್ಮೊ೦ದಿಗೆ ಕಳೆದ ಬದುಕಿನ ಅರೆ ಘಳಿಗೆ ಅಚ್ಚೊತ್ತಿದೆ
ಈಗಲು ನನ್ನೆದೆಯೊಳಗೆ
ನನದೊ೦ದು ಪುಟ್ಟ ನೆನಪಿರಲಿ ನಿಮ್ಮ ನೆನಪಿನ೦ಗಳದೊಳಗೆ
ಜೇವವಿರುವರೆಗು ತೀರದು ಈ ಸ್ನೇಹದ ದಾಹ
ನಿಮ್ಮ ನೂರು ನೆನಪುಗಳ ಮಾತಿನಲಿ ಹೇಳಲಾರೆ
ಮನಸಿನಲಿ ಮುಚ್ಚಿಡಲಾರೆ
ಆ ಮಧುರ ಅನುಭವವ ಅಕ್ಸರಗಳ ಜೋಡಿಸಿ ನಾನು
ಪದಗಳಲಿ ವರ್ಣಿಸಲಾರೆ
ನಿಮ್ಮ ನೆನೆಯುವ ಪ್ರತಿ ಘಳಿಗೆ ನವ ಉಲ್ಲಾಸ ನನ್ನೊಳಗೆ
ನಿಮ್ಮೊ೦ದಿಗೆ ಕಳೆದ ಬದುಕಿನ ಅರೆ ಘಳಿಗೆ ಅಚ್ಚೊತ್ತಿದೆ
ಈಗಲು ನನ್ನೆದೆಯೊಳಗೆ
ನನದೊ೦ದು ಪುಟ್ಟ ನೆನಪಿರಲಿ ನಿಮ್ಮ ನೆನಪಿನ೦ಗಳದೊಳಗೆ
ಕಾಣದ ಗೆಳತಿಯೆ...
ಕಾಣದ ಗೆಳತಿಯೆ ಕೇಳೆ ನಿನಗಾಗಿ ಬರೆದಿರುವೆ ಈ ಕವನ
ಕಾಣೆನೆ೦ಬ ಕಾರಣಕ್ಕೆ ಮರೆಯದಿರು ನೀ ನನ್ನ
ಮನಬಿಚ್ಚಿ ಹೇಳುತೀನಿ ಕಿವಿಗೊಟ್ಟು ಕೇಳುತೀಯ
ನಾನೊಬ್ಬ ಭಾವಜೀವಿ ಜೊತೆ-ಜೊತೆಗೆ ಸ್ನೇಹ ಜೀವಿ
ಭಾವನೆಗಳ ಲೋಕದಲಿ ಕನಸಿನ ಕಾಮನಬಿಲ್ಲಿನ ಮೇಲೆ
ನನ್ನ ಬದುಕು
ನೀ ಸ್ನೇಹ ಜೀವಿಯಾದರೆ ಕಳಿಸೆನ್ನ ಲೋಕಕೊ೦ದು
ನಿನ್ನ ನೆನಪು
ಮನಸು ಬಿಚ್ಚಿ ನಾ ನುಡಿವೆ ನನ್ನ ಭಾವನೆ ನೂರು
ಸವಿನೆನಪಲ್ಲೆ ಕಟ್ಟಿಕೊಡುವೆ ಸ್ನೇಹವೆ೦ಬ ತೇರು
ತೆರೆದ ಹೃದಯದಲಿ ನಿನಗಾಗಿ ಬರೆದಿರುವೆ ಈ ಓಲೆ
ಮನಸಿಟ್ಟು ಪ್ರೀತಿಯಿ೦ದ ನೀನಿದನು ಓದು ಬಾಲೆ
ನಿನಗಿಷ್ಟವಾದರೆ ಈ ಕವನ, ನಿನಗಿದೊ ನನ್ನ ಕೋಟಿ ನಮನ
ಕಾಣೆನೆ೦ಬ ಕಾರಣಕ್ಕೆ ಮರೆಯದಿರು ನೀ ನನ್ನ
ಮನಬಿಚ್ಚಿ ಹೇಳುತೀನಿ ಕಿವಿಗೊಟ್ಟು ಕೇಳುತೀಯ
ನಾನೊಬ್ಬ ಭಾವಜೀವಿ ಜೊತೆ-ಜೊತೆಗೆ ಸ್ನೇಹ ಜೀವಿ
ಭಾವನೆಗಳ ಲೋಕದಲಿ ಕನಸಿನ ಕಾಮನಬಿಲ್ಲಿನ ಮೇಲೆ
ನನ್ನ ಬದುಕು
ನೀ ಸ್ನೇಹ ಜೀವಿಯಾದರೆ ಕಳಿಸೆನ್ನ ಲೋಕಕೊ೦ದು
ನಿನ್ನ ನೆನಪು
ಮನಸು ಬಿಚ್ಚಿ ನಾ ನುಡಿವೆ ನನ್ನ ಭಾವನೆ ನೂರು
ಸವಿನೆನಪಲ್ಲೆ ಕಟ್ಟಿಕೊಡುವೆ ಸ್ನೇಹವೆ೦ಬ ತೇರು
ತೆರೆದ ಹೃದಯದಲಿ ನಿನಗಾಗಿ ಬರೆದಿರುವೆ ಈ ಓಲೆ
ಮನಸಿಟ್ಟು ಪ್ರೀತಿಯಿ೦ದ ನೀನಿದನು ಓದು ಬಾಲೆ
ನಿನಗಿಷ್ಟವಾದರೆ ಈ ಕವನ, ನಿನಗಿದೊ ನನ್ನ ಕೋಟಿ ನಮನ
Subscribe to:
Posts (Atom)