ನಿನ್ನ ಕನಸುಗಳ ಕಡಲಿನಲಿ
ನೆನಪುಗಳ ಒಡಲಿನಲಿ
ನಾನಾದೆ ಮುಗ್ದ ಮಗು ನಿನ್ನ ಪ್ರೀತಿ ಮಡಿಲಿನಲಿ
ನನ್ನ೦ತರ೦ಗ ಸಾಗರದಲ್ಲಿ ನೀನೆ ಪ್ರೀತಿ ಸ್ವಾತಿಮುತ್ತು
ದಿನಾ... ರಾತ್ರಿ ಹಗಲು ನನಗೆ ನಿನದೆ ನೆನಪು ಮೂರು ಹೊತ್ತು
ಕಡಲಿನ೦ತೆ ಆಳ ಪ್ರೀತಿ
ಕಣ್ಮುಚ್ಚಿ ಇಳಿದುಬಿಡು ಬೇಡ ಭೀತಿ
ಕಾರಣವಿಲ್ಲ ಕಾಯಲು ನನಗೆ, ಕರುಣೆ ಬಾರದೆ ನನ್ನಲಿ ನಿನಗೆ
ನೋಯಿಸಬೇಡ ಬ೦ದು ಬಿಡು ನನ್ನ ಹೃದಯದ ಮನೆಗೆ
ಮನದಲಿ ನಿನದೆ ಚಿತ್ರ ಬರೆದಿಡುವೆ
ನನ್ನ ಹೃದಯದ ಕದವ ತೆರೆದಿಡುವೆ
ಬಾ ನನ್ನ ಹೃದಯವ ಸೇರು, ಬ೦ದೆನ್ನ ಪ್ರೀತಿಯ ತೆರನೇರು
ನಿನ್ನ ಪ್ರೀತಿಸಲು ಬೇಡ ನನಗೆ ಕಾರಣ ನೂರು
ನಿನ್ನನೆ ಪ್ರೀತಿಸುವೆ ನಾನು ಪಣವಾಗಿಟ್ಟು ನನ್ನುಸಿರು
Monday, 30 July 2007
Subscribe to:
Post Comments (Atom)
2 comments:
kanasina varnane chennagide
hi
Bahala chennagi barediddira
Haage innu uttama muttugalu nimma yedeyaladinda horabarali yendu ashisuttene
Prema
Post a Comment