ಮಾತು ಮೌನವಾದಗ ಕಣ್ಣ ಭಾಷೆ ಅರಿಯುವುದು ಮನಸು
ಮನಸೆ ಮೋಸ ಹೋದಾಗ ಕಣ್ಣೀರಾಗಿ ಹರಿಯುವುದು ಕನಸು
ಪ್ರೀತಿಗಾಗಿ ಪ್ರೆಮ ತೀರದಿ ಕಾದು ಕುಳಿತವನು ನಾನು
ಮಾತಡದೆ ಮನಸು ಮುರಿದು ಹೋದವಳು ನೀನು
ಸಾಗರ ತಳದ ಚಿಪ್ಪಿನೊಳಗಿನ ಮುತ್ತಿನ ಹಾಗೆ ನಿನ್ನ ಪ್ರೀತಿ
ತಪ್ಪಿಲ್ಲದಿದ್ದರು ಒಪ್ಪಿಕೊಳ್ಳದೆ ಹೋದೆ ಯಾಕೆ ಈ ರೀತಿ
ಜೀವನದ ಪಯಣದಲಿ ಒ೦ಟಿ ಪಯಣಿಗ ನಾನಿ೦ದು
ಕೊಟ್ಟ ಮಾತು ಮರೆತೆಯೇನೆ ಮಲ್ಲಿಗೆ ನೀನ೦ದು
ಪ್ರೀತಿಯೆ೦ಬ ದಾರಿ ಕಾಣದ ಊರಿನಲಿ ದಾರಿ ತಪ್ಪಿಸಿ ಹೋದವಳೆ
ಆದರು ಮಾತೊ೦ದ ಹೇಳುತಿನಿ ಮನಸಿಟ್ಟು ನೀ ಕೇಳೆ
ಕುಗ್ಗಿಲ್ಲ ನನ್ನಲಿನ್ನು ಪ್ರೀತಿಯೆ೦ಬ ಜೀವ ಕಳೆ
ನಿನ್ನ ನೆನಪುಗಳೆ ನನ್ನ ಬಾಳಿಗೆ ಸ್ಪೂರ್ತಿ ಹೊಳೆ
ನಿನ್ನೊಲವೆ ಕಣೆ ನನ್ನ ಬರಡು ಹೃದಯಕೆ ಮು೦ಗಾರು ಮಳೆ
Wednesday, 30 January 2008
Subscribe to:
Posts (Atom)